ಪರಿಚಯ

ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಮತೀಯ ಅಲ್ಪಸಂಖ್ಯಾತರಿಗೆ ಸಾಲಸೌಲಭ್ಯವನ್ನು ಒದಗಿಸುತ್ತಿತ್ತು. ಹೀಗಿದ್ದರೂ, ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿದ್ದ ಯೋಜನೆಗಳು ಮತೀಯ ಅಲ್ಪಸಂಖ್ಯಾತರ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಚ್ಚಿನ ಪರಿಣಾಮವನ್ನು ಬೀರುತ್ತಿಲ್ಲ ಎಂಬ ಅಂಶವನ್ನು ಗಮನಿಸಿ, ಮತ್ತು ರಾಜ್ಯದ ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಉತ್ತಮಪಡಿಸುವ ಸಲುವಾಗಿ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಏಕೈಕ ಉದ್ದೇಶದಿಂದ ಆಗಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ರಾಮಕೃಷ್ಣ ಹೆಗ್ಡೆಯವರ ನೇತೃತ್ವದ ಸರ್ಕಾರವು ದಿನಾಂಕ 07.02.1986ರಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಎಂಬ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿತು.

ಕರ್ನಾಟಕದ ಅಲ್ಪಸಂಖ್ಯಾತ ಮಹಿಳೆಯರಿಗೆ ಆರ್ಥಿಕ ಚಟುವಟಿಕೆಯ ಪುನರುಜ್ಜೀವನಕ್ಕಾಗಿ ಸಬ್ಸಿಡಿ ಯೋಜನೆಯೊಂದಿಗೆ (ವೈಯಕ್ತಿಕ) ಸೂಕ್ಷ್ಮ ಸಾಲ

ಕೋವಿಡ್-19 ರ ಪಿಡುಗಿನಿಂದಾಗಿ ತೊಂದರೆಗೊಳಗಾದ,ನಿಗಮದ ಯಾವುದೇ ಯೋಜನೆಯಲ್ಲೂ ಇದುವರೆಗೆ ಸಾಲ,ಸಹಾಯಧನ ಯಾವುದನ್ನೂ ಪಡೆಯದ ಕಡುಬಡತನದಲ್ಲಿರುವ ಅಲ್ಪಸಂಖ್ಯಾತ ಸಮುದಾಯz ಬಿಪಿಎಲ್ ಕಾರ್ಡ್ ಹೊಂದಿರುವ 25 ರಿಂದ 50 ವಯೋಮಾನದೊಳಗಿನ ಮಹಿಳೆಯರಿಗೆ,ತಳ್ಳುವ ಗಾಡಿಯಲ್ಲಿ ವ್ಯಾಪಾರ, ಬೀದಿ ವ್ಯಾಪಾರ, ಜಾvÉæಗಳಲ್ಲಿ ವ್ಯಾಪಾರ, ಕಿರಾಣಿ ಅಂಗಡಿ,ಅರಿಷಿನ/ ಕುಂಕುಮ/ ಅಗರಬತ್ತಿ/ಕರ್ಪೂರ, ಪಾದಚಾರಿ ಮಾರ್ಗದಲ್ಲಿ, ಟೀ/ಕಾಪಿ ಮಾರಾಟ, ಎಳನೀರು ವ್ಯಾಪಾರ, ಹೂವಿನ ವ್ಯಾಪಾರ, ತರಕಾರಿ ವ್ಯಾಪಾರ, ಹಣ್ಣಿನ ವ್ಯಾಪಾರ, ಇನ್ನಿತರ ಸಣ್ಣ ವ್ಯಾಪಾರ ನಡೆಸಲು ಆರಂಭಿಕ ಬಂಡವಾಳಕ್ಕಾಗಿ ರೂ.10,000/-ಮೊತ್ತದ( ರೂ.8000/- ಸಾಲ +ರೂ.2,000/- ಸಬ್ಸಿಡಿ) ಅಲ್ಪಾವಧಿ ಸಾಲ ಯೋಜನೆ ಇದು.


ಸಾಲ ನೀಡಿಕೆ ವಿಧಾನ:

1) ಅರ್ಜಿದಾರಳು ಕರ್ನಾಟಕ ರಾಜ್ಯದ ಮಹಿಳಾ ನಿವಾಸಿಯಾಗಿರಬೇಕು
2) ಅರ್ಜಿದಾರಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು [ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಅಥವಾ ಪಾರ್ಸಿ]
3) ಅರ್ಜಿದಾರಳು ಎಎವೈ ಅಥವಾ ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು. ಪಡಿತರ ಕಾರ್ಡ್‌ಗೆ ಕೇವಲ ಒಂದು ಅರ್ಜಿಯನ್ನು ಮಾತ್ರ ಅನುಮತಿಸಲಾಗುತ್ತದೆ
4) ಅರ್ಜಿದಾರಳು ಆಕೆಯ ಹೆಸರಿನಲ್ಲಿ ಮಾನ್ಯ ಆಧಾರ್ ಕಾರ್ಡ್ ಹೊಂದಿರಬೇಕು
5) ಅರ್ಜಿದಾರಳು ತನ್ನ ಹೆಸರಿನಲ್ಲಿ ಮಾನ್ಯ ಮತ್ತು ಆಪರೇಟಿಂಗ್ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
6) ಅರ್ಜಿದಾರಳು 1-ಸೆಪ್ಟೆಂಬರ್ -2020 ರಂತೆ 25 ರಿಂದ 50 ವರ್ಷ ವಯಸ್ಸಿನವರಾಗಿರಬೇಕು
7) ಅರ್ಜಿದಾರಳ ಕುಟುಂಬ ಆದಾಯವು ವಾರ್ಷಿಕ 1.2 ಲಕ್ಷ ರೂ.ಗಿಂತ ಕಡಿಮೆ ಅಥವಾ ಸಮನಾಗಿರಬೇಕು
8) ಅರ್ಜಿದಾರಳು ಕೆಎಂಡಿಸಿಯಿಂದ ಪಡೆದ ಯಾವುದೇ ಹಿಂದಿನ ಸಾಲವನ್ನು ಹೊಂದಿರಬಾರದು
9) ಅರ್ಜಿದಾರಳು ಅಂಗವೈಕಲ್ಯ ಹೊಂದಿರುವ ವ್ಯಕ್ತಿ, ಅಥವಾ ವಿಧವೆಯಾಗಿದ್ದರೆ ಅಥವಾ ಗ್ರಾಮೀಣ ಪ್ರದೇಶದವರಾಗಿದ್ದರೆ ಆದ್ಯತೆ ನೀಡಲಾಗುತ್ತದೆ
10) ಒಂದು ಮೊಬೈಲ್ ಸಂಖ್ಯೆಯಿಂದ ಕೇವಲ ಒಂದು ಅಪ್ಲಿಕೇಶನ್ ಮಾಡಲು ಅನುಮತಿಸಲಾಗುತ್ತದೆ

ಮೈಕ್ರೋ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ

  • ಮೊದಲ ಹಂತ:
    • ನಿಗಮದ ವೆಬ್ ಸೈಟಿನಲ್ಲಿ(kmdcmicro.karnataka.gov.in) ಸಾಲದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಆನ್ ಲೈನಿನಲ್ಲೇ ಭರ್ತಿ ಮಾಡಿ,ಸಂಬಂಧಪಟ್ಟದಾಖಲಾತಿಗಳೊಂದಿಗೆ ಅಪ್ ಲೋಡ್ ಮಾಡಿದಾಗ,ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಓಟಿಪಿ ಸಂಖ್ಯೆಯೊಂದು ಬರುತ್ತದೆ. ಅದನ್ನು ಆನ್ ಲೈನಿನಲ್ಲಿ ದಾಖಲಿಸಿದಾಗ ಅರ್ಜಿಯು ನಿಗಮದ ವೆಬ್ ಸೈಟಿನಲ್ಲಿ ರಿಜಿಸ್ಟರ್ ಆಗುತ್ತದೆ. ಆಗ ಅರ್ಜಿದಾರರ ರಿಜಿಸ್ಟರ್ ಸಂಖ್ಯೆ ಮೊಬೈಲಿಗೂ ರವಾನೆಯಾಗುತ್ತದೆ. ರಿಜಿಸ್ಟರ್ ಆದ ಆನ್ ಲೈನ್ ಅರ್ಜಿಯ ಎರಡು ಪ್ರತಿಗಳನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳಬೇಕು.
    • ಆನ್ ಲೈನ್ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು,ನಿಗಮವು ನಿರ್ಧರಿಸಿದ ಮಾನದಂಡಗಳ ಆಧಾರದಲ್ಲಿ,ಆನ್ ಲೈನಿನಲ್ಲಿಯೇ ಆದ್ಯತೆ ಮೇರೆಗೆ ಜಿಲ್ಲಾವಾರು,ತಾಲೂಕುವಾರು ಮತ್ತು ಗ್ರಾಮಪಂಚಾಯತುವಾರಾಗಿ ಹಂಚಿಕೆಯಾದÀ ಗುರಿಗೆ ಅನುಗುಣವಾಗಿ ಫಲಾನುಭವಿಗಳ ಆಯ್ಕೆ ಮಾಡಲಾಗುವುದು
  • ಎರಡನೇ ಹಂತ:
    • 3. ಹೀಗೆ ಆಯ್ಕೆಯಾದ ಫಲಾನುಭವಿಗಳಿಗೆ ಮೊಬೈಲ್ ಮೂಲಕ ಆಯ್ಕೆಯಾಗಿರುವ ಬಗ್ಗೆ ಸಂದೇಶ ಕಳುಹಿಸಲಾಗುತ್ತದೆ. ಫಲಾನುಭವಿಗಳು ಈಗಾಗಲೇ ತಮಗೆ ನೀಡಿದ ರಿಜಿಸ್ಟರ್ ನಂಬರ್ ಮೂಲಕ ಲಾಗಿನ್ ಆಗಿ ಆನ್ ಲೈನಿನಿಂದ ಸಾಲದ ದಾಖಲೆ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು,ಭರ್ತಿ ಮಾಡಿ ಸಹಿ ಹಾಕಿದ ದಾಖಲೆ ಪತ್ರಗಳನ್ನು ಸ್ಕಾನ್ ಮಾಡಿ ಮತ್ತೆ ಅಪಲೋಡ್ ಮಾಡಬೇಕು.
    • 4. ಆನ್ ಲೈನಿನಲ್ಲಿ ಅಪಲೋಡ್ ಮಾಡಿದ ನಂತರ, ಸಹಿ ಹಾಕಿಟ್ಟುಕೊಂಡ .ಸಾಲ ಮಂಜೂರಾತಿ ಪತ್ರ ಹಾಗೂ ತಗಾದೆಪತ್ರ,ಹಿಂದೆ ಸಲ್ಲಿಸಿದ ಸಾಲದ ಅರ್ಜಿ ಮತ್ತು ನೀಡಿರುವ ಕೆವೈಸಿ ದಾಖಲೆಗಳ ಪ್ರತಿಗಳೊಂದಿಗೆ, ಖುದ್ದಾಗಿ ಆಯಾ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ಸಲ್ಲಿಸಬೇಕು.

ವೆಬ್‌ಸೈಟ್‌ನಲ್ಲಿ ನಿಮ್ಮ ಅಪ್ಲಿಕೇಶನ್‌ನ ಸ್ಥಿತಿಯನ್ನು ನೀವು ಪರಿಶೀಲಿಸಬಹುದು